ಕನ್ನಡತಿ ಸೀರಿಯಲ್ ನ ಈ ಮಟ್ಟದ ಯಶಸ್ಸಿಗೆ ಕಾರಣ ಏನೆಂದು ಹೇಳಿರುವ ನಟಿ, ಇದರ ಹಿಂದೆ ಇಡೀ ಕನ್ನಡತಿ ಸೀರಿಯಲ್ ನ ತಂಡದ ಶ್ರಮ ಇದೆ ಎಂದಿದ್ದಾರೆ. ಧಾರಾವಾಹಿಯ ಸ್ಟೋರಿ ಲೈನ್ ಬಹಳ ಪರಿಣಾಮಕಾರಿಯಾಗಿರುವುದು ಮಾತ್ರವೇ ಅಲ್ಲದೇ ಧಾರಾವಾಹಿಯ ತಂಡವು ಎಂತಹ ವಾತಾವರಣವನ್ನು ನಿರ್ಮಾಣ ಮಾಡಿದೆ ಎಂದರೆ ನಾವೆಲ್ಲರೂ ಕೂಡಾ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವ ಭಾವನೆ ಮೂಡುವುದಿಲ್ಲ ಎಂದಿದ್ದಾರೆ. ಅಲ್ಲದೇ ಸೀರಿಯಲ್ ಗೆ ಈ ಮಟ್ಟದ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಕೂಡಾ ತಿಳಿಸಿದ್ದಾರೆ.
0 Comments