ಹಾಗಿದ್ದರೆ ಟೀಸರ್ ನಲ್ಲಿ ಕಾಣಿಸಿಕೊಂಡಿರುವ ನಟಿ ಯಾರು ಎನ್ನುವುದಾದರೆ, ಅವರು ದಕ್ಷಿಣ ಸಿನಿರಂಗದಲ್ಲಿ ವಿಶೇಷವಾಗಿ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಹೆಸರನ್ನು ಗಳಿಸಿರುವ ನಟಿ ಈಶ್ವರಿ ರಾವ್. ಕೆಲವು ದಿನಗಳ ಹಿಂದೆ ಕೆಜಿಎಫ್ ಚಾಪ್ಟರ್ ಟು ನಲ್ಲಿ ನಟಿ ಈಶ್ವರಿ ರಾವ್ ಅವರು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ವಿಷಯ ಸುದ್ದಿ ಆಗಿತ್ತು. ಆದರೆ ಆ ಪಾತ್ರ ಯಾವುದು? ಎಂದು ಮಾತ್ರ ಮಾಹಿತಿಗಳಾವುದೂ ಇದುವರೆವಿಗೂ ರಿವೀಲ್ ಆಗಿಲ್ಲ. ಆದರೆ ಟೀಸರ್ ನಲ್ಲಿ ಕೆಲವೇ ಸೆಕೆಂಡುಗಳಲ್ಲಿ ಕಂಡರೂ ಕೂಡ ಈಶ್ವರಿ ರಾವ್ ಅವರದು ಒಂದು ಪವರ್ಫುಲ್ ಪಾತ್ರ ಎನ್ನುವಂತಹ ಲುಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
0 Comments