ಇಲ್ಲಿದೆ ನೋಡಿ ಬಿಗ್ ಬಾಸ್ ಆರಂಭವಾಗುವ ದಿನಾಂಕದ EXCLUSIVE ಅಪ್ಡೇಟ್ಸ್

ಈಗಾಗಲೇ ಅನ್ಯ ಭಾಷೆಗಳಲ್ಲಿ ಬಿಗ್ ಬಾಸ್ ಸೀಸನ್ ಗಳು ನಡೆಯುತ್ತಿದ್ದು ತೆಲುಗು ಬಿಗ್ ಬಾಸ್ ಈಗಾಗಲೇ ಮುಗಿದಿದೆ. ಇನ್ನು ಹಿಂದಿ ಮತ್ತು ತಮಿಳು ಬಿಗ್ ಬಾಸ್ ಪ್ರಗತಿಯಲ್ಲಿದೆ. ಈ ನಡುವೆ ಕನ್ನಡದಲ್ಲಿ ಬಾಸ್ ಯಾವಾಗ ಆರಂಭವಾಗುವುದು ? ಎನ್ನುವುದು ಅನೇಕರ ಪ್ರಶ್ನೆಯಾಗಿತ್ತು. ಇದಕ್ಕೆ ಉತ್ತರವೆಂಬಂತೆ ಕಳೆದ ಕೆಲವು ದಿನಗಳಿಂದಲೂ ಕೂಡ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿಗಳು ಹರಿದಾಡಿದ್ದವು. ಬಹುತೇಕ ಜನವರಿ ಕೊನೆಯ ವಾರದಲ್ಲಿ ಬಿಗ್ ಬಾಸ್ ಸೀಸನ್ 8 ಎಂದು ಎಲ್ಲರೂ ನಿರೀಕ್ಷಣೆ ಕೂಡಾ ಮಾಡಿದ್ದರು. ಆದರೆ ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರ ಬಿಗ್ ಬಾಸ್ ಸೀಸನ್ 8 ಗೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು ಎನ್ನಲಾಗಿದೆ. ಏಕೆಂದರೆ ಲೇಟೆಸ್ಟ್ ಸುದ್ದಿಗಳ ಪ್ರಕಾರಈ ಬಾರಿ ಬಿಗ್ ಬಾಸ್ ನ ಹೊಸ ಸೀಸನ್ ಮಾರ್ಚ್ ಕೊನೆಯಲ್ಲಿ ಆರಂಭವಾಗಲಿದೆ ಎನ್ನುವ ಸುದ್ದಿಯೊಂದು ಹೊರಬಂದಿದೆ.

Post a Comment

0 Comments