ಹಾಲಿವುಡ್ ನ ಅವೆಂಜರ್ಸ್, ತಮಿಳಿನ ಮಾಸ್ಟರ್ ಗಳ ದಾಖಲೆ ಹಿಂದಿಕ್ಕಿದ ಕೆಜಿಎಫ್

ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಸಂಖ್ಯೆಯ ವೀಕ್ಷಣೆಗಳನ್ನು ಪಡೆದ ವಿಶ್ವದ ಮೊದಲ ಯೂಟ್ಯೂಬ್ ವೀಡಿಯೋ ಟೀಸರ್ ಎಂಬ ಹೆಗ್ಗಳಿಕೆಯನ್ನು ಕೆಜಿಎಫ್ ಚಾಪ್ಟರ್ ಟು ಈಗ ಪಡೆದುಕೊಂಡಿದೆ. ಟೀಸರ್ ನ ವೀಕ್ಷಣೆಯಲ್ಲಿ ಹಾಲಿವುಡ್ ಸಿನಿಮಾಗಳನ್ನು ಕೂಡಾ ಹಿಂದೆ ಹಾಕಿ ಅಧಿಕ, ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಣಗಳನ್ನು ಪಡೆಯುತ್ತಿದೆ. ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದ ಟೀಸರ್ ಗಳಲ್ಲಿ ಮೊದಲನೆಯ ಸ್ಥಾನವನ್ನು ಕೆಜಿಎಫ್ ಚಾಪ್ಟರ್ ಟು ತನ್ನದಾಗಿಸಿಕೊಂಡಿದೆ.

Post a Comment

0 Comments