ಶಿವಣ್ಣ ಸಿನಿಮಾದಲ್ಲಿ ಹಿರೋಯಿನ್ ಆಗಿದ್ದ ಈ ನಟಿ ಸಲ್ಮಾನ್ ಖಾನ್ ಜೊತೆ

ಈ ನಟಿಯು ಮತ್ತಾರೂ ಅಲ್ಲ ನಟಿ ಭಾಗ್ಯಶ್ರೀ ಅವರು. ಕನ್ನಡದ ಅಮ್ಮಾವ್ರ ಗಂಡ, ಗಂಡುಗಲಿ ಕುಮಾರ ರಾಮ, ಸೀತಾರಾಮ ಕಲ್ಯಾಣ ಸಿನಿಮಾಗಳಲ್ಲಿ ನಟಿಸಿದ್ದಾರೆ ಭಾಗ್ಯ ಶ್ರೀ ಅವರು. ಈ ನಟಿ ನಟಿಸಿದ ಮೊದಲ ಸಿನಿಮಾವೇ ಬಾಲಿವುಡ್ ನ ಮೈನೆ ಪ್ಯಾರ್ ಕಿಯಾ‌. ಈ ಸಿನಿಮಾ ನಿರ್ದೇಶನ ಮಾಡಿದ್ದು ಸೂರಜ್ ಬರ್ಜಾತಿಯಾ ಅವರು. ಅವರು ಸಿನಿಮಾ ಕಥೆ ಸಿದ್ಧವಾದ ಮೇಲೆ ಇವರು ಭಾಗ್ಯಶ್ರೀ ಯನ್ನು ಸಿನಿಮಾ ಮಾಡಲು ಕೇಳಿದಾಗ ಅವರು ಓದುವ ಆಸಕ್ತಿಯಿದ್ದು ವಿದೇಶಕ್ಕೆ ಹೋಗಲು ಬಯಸಿದ್ದರಿಂದ ಸಿನಿಮಾ ಮಾಡಲು ಒಪ್ಪಲಿಲ್ಲ.



ಆದರೆ ನಿರ್ದೇಶಕ ಪ್ರಯತ್ನ ಬಿಡಲಿಲ್ಲ. ಅವರು ಕಥೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಏಳು ಬಾರಿ ಭಾಗ್ಯಶ್ರೀ ಅವರನ್ನು ಒಪ್ಪಿಸಲು ಪ್ರಯತ್ನ ಮಾಡಿದರೂ ಸಫಲರಾಗಲಿಲ್ಲ‌. ಆದರೆ ಭಾಗ್ಯಶ್ರೀ ಅವರ ತಂದೆ ಮಗಳನ್ನು ವಿದೇಶಕ್ಕೆ ಕಳುಹಿಸಲು ಒಪ್ಪದೇ ಭಾರತದಲ್ಲಿ ಶಿಕ್ಷಣ ಮುಂದುವರೆಸಲು ನಿಶ್ಚಯ ಮಾಡಿದರು. ಆಗ ಭಾಗ್ಯಶ್ರೀ ಹೇಗೂ ವಿದೇಶಕ್ಕೆ ಹೋಗದ ಕಾರಣ ನಿರ್ದೇಶಕ ಎಂಟನೇ ಬಾರಿ ಅವರ ಬಳಿ ಸಿನಿಮಾ ಬಗ್ಗೆ ಹೇಳಿದಾಗ ಭಾಗ್ಯಶ್ರೀ ಹೇಗೋ ಒಪ್ಪಿ ಬಿಟ್ಟರು‌. ಅದಾದ ನಂತರ ಮೈನೇ ಪ್ಯಾರ್ ಕಿಯಾ ಇತಿಹಾಸವನ್ನು ಬರೆಯಿತು. ಭಾಗ್ಯಶ್ರೀ ಇಡೀ ದೇಶ ಮೆಚ್ಚಿದ ನಟಿಯಾಗಿ ಬಿಟ್ಟರು.

Post a Comment

0 Comments