ಅಗಲಿದ ಹಿರಿಯ ನಟ ಶನಿ ಮಹದೇವಪ್ಪ ಅವರ ಕುರಿತಾಗಿ ಕನ್ನಡ ಸಿನಿಮಾ ರಂಗದ ಮತ್ತೋರ್ವ ಹಿರಿಯ ನಟ ಶಿವರಾಂ ಅವರು ತಮ್ಮ ಮಾತುಗಳನ್ನು ಹಾಗೂ ಶನಿ ಮಹದೇವಪ್ಪನವರ ಕುರಿತಾದ ಕೆಲವು ಆಸಕ್ತಿಕರವಾದ ವಿಚಾರಗಳನ್ನು ಮಾದ್ಯಮವೊಂದರ ಮುಂದೆ ಹಂಚಿಕೊಂಡಿದ್ದಾರೆ. ಶಿವರಾಂ ಅವರಿಗೆ ಶನಿ ಮಹದೇವಪ್ಪನವರು ಸಿನಿಮಾ ರಂಗಕ್ಕೆ ಬರುವ ಮೊದಲಿನಿಂದಲೂ ಪರಿಚಯ ಇದ್ದವರು, ಅವರು ಕನ್ನಡ ಥಿಯೇಟರ್ಸ್ ಎನ್ನುವ ನಾಟಕ ಕಂಪನಿಯನ್ನು ಕೂಡಾ ನಡೆಸುತ್ತಿದ್ದರು. ರಾಜಾ ವಿಕ್ರಮ ನಾಟಕದಲ್ಲಿ ಅವರು ಶನಿಯ ಪಾತ್ರವನ್ನು ನಿರ್ವಹಿಸುತ್ತಿದ್ದರು, ಅವಕಾಶಗಳು ಬರದೇ ಇದ್ದಾಗ ಅವರು ತಮ್ಮ ಹೆಸರಿನ ಮುಂದೆ ಶನಿ ಎಂಬುದನ್ನು ಸೇರಿಸಿಕೊಂಡರು ಎಂದು ಹೇಳಿದ್ದಾರೆ ಶಿವರಾಂ ಅವರು.
0 Comments