ನಟ ರಕ್ಷ್ ಅವರು ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ್ದು ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ. ಕಿರುತೆರೆಗೆ ಕಾಲಿಟ್ಟ ಅವರಿಗೆ ಈ ಸೀರಿಯಲ್ ಜನಪ್ರಿಯತೆಯನ್ನು ತಂದುಕೊಟ್ಟಿತು. ಸೀರಿಯಲ್ ಗೆ ಬರುವ ಮೊದಲೇ ನಟನೆಯಲ್ಲಿ ಆಸಕ್ತಿ ಇದ್ದ ಅವರು ಸಿನಿಮಾಗಳಲ್ಲಿ ಹೀರೋ ಆಗುವ ಕನಸನ್ನು ಕಂಡಿದ್ದವರು. ಆಗಲೇ ಸಾಕಷ್ಟು ನಾಟಕಗಳಲ್ಲಿ ನಟಿಸಿ ಅನುಭವವನ್ನು ಪಡೆದುಕೊಂಡಿದ್ದರು. ತನ್ನ ಸ್ವಸಾಮರ್ಥ್ಯ ಹಾಗೂ ಪ್ರತಿಭೆಯಿಂದಲೇ ಅಚಕಾಶವನ್ನು ಪಡೆದುಕೊಂಡು ಈ ಮಟ್ಟದ ಜನಪ್ರಿಯತೆಯನ್ನು ಪಡೆದಿರುವ ನಟ ರಕ್ಷ್ ಅವರಿಗೆ ಯಾವುದೇ ಸಿನಿಮಾ ಹಿನ್ನೆಲೆಯಾಗಲೀ ಅಥವಾ ಗಾಡ್ ಫಾದರ್ ಗಾಡ್ ಆಗಲಿ ಇಲ್ಲ.
0 Comments