ಅನೇಕ ವರ್ಷಗಳ ಹೋರಾಟದ ನಂತರ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಧಿ ಸಮರ್ಪಣಾ ಅಭಿಯಾನ ಆರಂಭವಾಗಿದ್ದು ದೇಗುಲ ನಿರ್ಮಾಣ ಕಾರ್ಯಕ್ಕೆ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡಲು, ದೇಣಿಗೆಯನ್ನು ನೀಡಲು ಮುಂದಾಗಿದ್ದಾರೆ. ಇದೇ ವೇಳೆಯಲ್ಲಿ ಕೆಲವರು ಸೋಶಿಯಲ್ ಮೀಡಿಯಾ ಗಳಲ್ಲಿ ಹಾಗೂ ಬೇರೆ ಕಡೆಗಳಲ್ಲಿ ಮಂದಿರ ನಿರ್ಮಾಣ ಕಾರ್ಯಕ್ಕೆ ಜನರೇಕೆ ದೇಣಿಗೆಯನ್ನು ನೀಡಬೇಕು? ಎಂದು ಪ್ರಶ್ನೆಯನ್ನು ಕೂಡಾ ಮಾಡುತ್ತಿದ್ದಾರೆ. ಈ ವಿಷಯವಾಗಿ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರು ದೇಣಿಗೆಯನ್ನು ಏಕೆ ನೀಡಬೇಕು ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಪ್ರಶ್ನೆ ಮಾಡಿದವರಿಗೆ ಅರ್ಥಪೂರ್ಣ ವಾದ ಉತ್ತರವನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ.
ವೀಡಿಯೋದಲ್ಲಿ ಅವರು, ‘ಎಲ್ಲ ಕನ್ನಡ ಮನಸ್ಸುಗಳಿಗೆ ನಮಸ್ಕಾರ. ಗುರು ರಾಯರ ನೆಚ್ಚಿನ ದೇವರು ಶ್ರೀ ರಾಮ, ಮೂಲ ರಾಮ ಎಂದು ಒಂದು ರಾಮ ಸ್ತೋತ್ರವನ್ನು ಹೇಳಿದ ಅವರು, ರಾಮ ನಮ್ಮ ದೊರೆ, ನಮ್ಮ ಭಾರತದ ಪ್ರತೀಕ, 500 ವರ್ಷಗಳ ಹೋ ರಾ ಟದ ನಂತರ ರಾಮ ಮಂದಿರ ನಿರ್ಮಾಣದ ಆದೇಶ ಸಿಕ್ಕಿದೆ. ಎಲ್ಲ ನನ್ನ ಬಾಂಧವರಲ್ಲಿ ನನ್ನ ಮನವಿ ಇಷ್ಟೇ, ತಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಹಣವನ್ನು ರಾಮ ಮಂದಿರ ಕಟ್ಟುವುದಕ್ಕೆ ದೇಣಿಗೆಯಾಗಿ ನೀಡಿ. ದೇವಸ್ಥಾನ ನಿರ್ಮಾಣ ಆದ ಮೇಲೆ ಇಡೀ ವಿಶ್ವವೇ ಬಂದು ನೋಡುತ್ತದೆ. ನಾವು-ನೀವು ಕೂಡ ಅಲ್ಲಿಗೆ ಹೋಗುತ್ತೇವೆ. ಅಲ್ಲಿ ಹೋಗಿ ನಿಂತಾಗ ನನ್ನ ಒಂದು ಅಳಿಲು ಕಾಣಿಕೆ ಕೂಡ ಈ ಆಲಯದಲ್ಲಿ ಸೇರಿದೆ ಅಂತ ನಮ್ಮ ಮನಸ್ಸು ಹೆಮ್ಮೆ ಪಡಬೇಕು ಎಂದು ಅವರು ಹೇಳಿದ್ದಾರೆ.
0 Comments