ಕನ್ನಡ ಕಿರುತೆರೆಯ ಜನಪ್ರಿಯ ಹೆಸರುಗಳಲ್ಲಿ ಒಂದು ಸಿದ್ದು ಮೂಲಿಮನಿ. ಈಗಾಗಲೇ ಸಿದ್ದು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆಯಾದರೂ ಅವರು ಜನರಿಗೆ ಹತ್ತಿರವಾಗಿದ್ದು ಮಾತ್ರ ಕಿರುತೆರೆಯ ಮೂಲಕ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಇದೇ ಸಿದ್ಧು ಅವರು ಸ್ಯಾಂಡಲ್ವುಡ್ ನ ಸ್ಟಾರ್ ನಟನ ಜೊತೆಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ನಟ ಸಿದ್ದು ಮೂಲಿಮನಿ ಅವರು ಕಿಚ್ಚ ಸುದೀಪ್ ಅವರ ನಟನೆಯ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನೂಪ್ ಭಂಡಾರಿ ಅವರ ನಿರ್ದೇಶನದ ಫ್ಯಾಂಟಮ್ ಸಿನಿಮಾ ಈಗಾಗಲೇ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಸದ್ದು ಹಾಗೂ ಸುದ್ದಿಯನ್ನು ಮಾಡಿದೆ. ವಿಶೇಷ ಎಂದರೆ ಸಿದ್ದು ಅವರು ಅನೂಪ್ ಭಂಡಾರಿಯವರ ಜೊತೆಗೆ ಅವರ ರಂಗಿತರಂಗ ಮತ್ತು ರಾಜರತ್ನ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸಿದ್ದರು.
ಈ ವಿಷಯವಾಗಿ ಮಾದ್ಯಮವೊಂದರ ಮುಂದೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಸಿದ್ದು ಅವರು ಈ ಸಿನಿಮಾದಲ್ಲಿ ತಾನು ಮುನ್ನಾ ಎನ್ನುವ ಪಾತ್ರವನ್ನು ಪೋಷಿಸುತ್ತಿದ್ದು, ಪನ್ನಾ ಪಾತ್ರ ಪೋಷಿಸುತ್ತಿರುವ ನೀತಾ ಅಶೋಕ್ ಜೊತೆಗೆ ಆಗಾಗ್ಗೆ ಜ ಗ ಳ ಮಾಡುವ ಪಾತ್ರ ತನ್ನದು ಎಂದು ಹೇಳಿದ್ದಾರೆ.
ತೆರೆಯ ಮೇಲೆ ತನ್ನ ಪಾತ್ರ ಹಾಗೂ ಆ ಪಾತ್ರಕ್ಕೆ ಹಾಕಿರುವ ವಸ್ತ್ರ ಎಲ್ಲಾ ಕೂಡಾ ಬಹಳ ವಿಭಿನ್ನವಾಗಿದೆ ಎಂದು ಹೇಳಿರುವ ಸಿದ್ಧು ಅವರು ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ಜೊತೆ ನಟಿಸುತ್ತಿರುವುದು ನಿಜಕ್ಕೂ ಸಂತೋಷವನ್ನು ನೀಡಿದೆ ಎಂದು ಹೇಳಿದ್ದಾರೆ.
ಸಿದ್ದು ಅವರು ಫ್ಯಾಂಟಮ್ ಅಲ್ಲದೇ ಇನ್ನೂ ಎರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ಅವರು ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಪಾರು ಸೀರಿಯಲ್ ನ ಪ್ರೀತಂ ಆಗಿ, ಅರಸನ ಕೋಟೆ ಅಖಿಲಾಂಡೇಶ್ವರಿಯು ಕಿರಿ ಮಗನ ಪಾತ್ರದಲ್ಲಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಅಲ್ಲದೇ ನವೀನ್ ಶಂಕರ್ ಮತ್ತು ಐಶಾನಿ ಶೆಟ್ಟಿ ಪ್ರಮುಖ ಪಾತ್ರ ಗಳಲ್ಲಿ ನಟಿಸುತ್ತಿರುವ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ಸಿದ್ದು ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡಾ ಒಂದು ವಿಭಿನ್ನ ಕಥಾನಕವನ್ನು ಹೊಂದಿದೆ ಎನ್ನಲಾಗಿದ್ದು ಇದರಲ್ಲಿ ಸಿದ್ಧು ಪ್ಯಾರಾಚೂಟ್ ಎನ್ನುವ ಡ್ರ ಗ್ ಗೀಳನ್ನು ಹೊಂದಿರುವ ಪಾತ್ರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
0 Comments