ಶಿವಣ್ಣ ಈ ಮೊದಲು ಕೂಡಾ ಟಾಲಿವುಡ್ ನ ಸ್ಟಾರ್ ನಟ ಬಾಲಕೃಷ್ಣ ಅವರ ಗೌತಮಿಪುತ್ರ ಶಾತಕರ್ಣಿ ಸಿನಿಮಾದಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದರು. ಅದಾದ ನಂತರ ಅವರು ಪರಭಾಷಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಶಿವಣ್ಣ ಅವರು ತಮಿಳು ಸಿನಿಮಾವೊಂದಕ್ಕಾಗಿ ಕಾಲವುಡ್ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಈಗಾಗಲೇ ಶಿವಣ್ಣ ಅವರನ್ನು ಸಂಪರ್ಕಿಸಿ, ಅವರ ಪಾತ್ರದ ಕುರಿತಾಗಿ ಚರ್ಚೆಯನ್ನು ಮಾಡಿದ್ದು, ಶಿವಣ್ಣ ಅವರು ಕೂಡ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
0 Comments