ಸರ್ವರ್‌ ಡೌನ್‌… ಮತ್ತೆ ನಿದ್ರೆಗೆ ಜಾರಿದ ಗೂಗಲ್‌, ಜಿ ಮೇಲ್‌, ಯೂಟ್ಯೂಬ್

ಹೊಸದಿಲ್ಲಿ: ಸರ್ವರ್‌ ಸಮಸ್ಯೆಯಿಂದಾಗಿ ವಿಶ್ವದಾದ್ಯಂತ ಗೂಗಲ್‌ ಸರ್ಚ್‌ ಎಂಜಿನ್‌, ಯೂಟ್ಯೂಬ್‌, ಜಿಮೇಲ್‌ ಸೇರಿದಂತೆ ಗೂಗಲ್‌ನ ಎಲ್ಲ ಸೇವೆಗಳು ಸೋಮವಾರ ಬಂದ್‌ ಆಗಿದ್ದು ವಿಶ್ವದ ಬಳಕೆದಾರರು ತೊಂದರೆಗೊಳಗಾದರು.

ಗೂಗಲ್‌ ಬಳಕೆದಾರರು ಜಿಮೇಲ್‌ ತೆರೆಯಲು ಆರಂಭಿಸಿದರೆ something went wrong, ಯೂಟ್ಯೂಬ್‌ನಲ್ಲಿ ತಾತ್ಕಾಲಿಕ ತೊಂದರೆಯಾಗಿದೆ ಕ್ಷಮಿಸಿ ಎನ್ನುವ ಸೂಚನೆ ಕಾಣಿಸಿತು.

ಭಾರತ, ಜಪಾನ್‌, ಐರೋಪ್ಯ ದೇಶಗಳು, ಅಮೆರಿಕದ ಕೆಲವೆಡೆ ಗೂಗಲ್‌ ಸಮಸ್ಯೆಯಾಗಿದೆ.

ಈ ವರ್ಷ ಗೂಗಲ್‌ ಸರ್ವರ್‌ ಸಮಸ್ಯೆಯಾಗಿರುವುದು ಇದು ಎರಡನೇ ಬಾರಿ. ಇತ್ತೀಚೆಗಷ್ಟೇ ಜಿಮೇಲ್‌ ಸರ್ವರ್‌ ಡೌನ್‌ ಆಗಿ ಕೆಲಕಾಲ ಸೇವೆ ಬಂದ್‌ ಆಗಿತ್ತು.

Post a Comment

0 Comments