ಮಹಾರಾಣಿಗಿಂತಲೂ ಶ್ರೀಮಂತೆ ಇನ್ಫೋಸಿಸ್ ಸುಧಾಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ

ದಿ ಗಾರ್ಡಿಯನ್ ಪತ್ರಿಕೆ ತಾನು ನಡೆಸಿರುವ ತನಿಖೆಯ ವರದಿಯನ್ನು ನೀಡಿದ್ದು ಅದರ ಪ್ರಕಾರ ಅಕ್ಷತಾ ಮೂರ್ತಿ ಅವರು ತಮ್ಮ ಬಹುಕೋಟಿ ಪೌಂಡ್ ಮೌಲ್ಯದ ಆಸ್ತಿ ವ್ಯವಹಾರಗಳನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಹೀಗೆ ಅಕ್ಷತಾ ಮೂರ್ತಿ ಅವರು ಬಹಿರಂಗ ಪಡಿಸದೆ ಇರುವ ವ್ಯವಹಾರಗಳ ಆಸ್ತಿಯ ಮೌಲ್ಯ ಎಷ್ಟಿದೆಯೆಂದರೆ ಆಕೆ ಬ್ರಿಟನ್ನಿನ ರಾಣಿ ಎಲಿಜಬೆತ್ ಗಿಂತ ಶ್ರೀಮಂತಳು ಎನ್ನಲಾಗುತ್ತಿದೆ. ಅಕ್ಷತಾ ಮೂರ್ತಿಯವರು ತಮ್ಮ ತಂದೆಯ ಇನ್ಫೋಸಿಸ್ ನಲ್ಲಿ ಸುಮಾರು 430 ಮಿಲಿಯನ್ ಪೌಂಡ್ ಅಂದರೆ 4,200 ಕೋಟಿ ರೂಪಾಯಿಗಳ ಮೌಲ್ಯದ ಶೇರ್ ಗಳನ್ನು ಹೊಂದಿದ್ದಾರೆ.


ಅಕ್ಷತಾ ಮೂರ್ತಿಯವರು ಹೊಂದಿರುವ ಆಸ್ತಿಯನ್ನು ಗಮನಿಸಿದಾಗ, ಅದರ ಮೌಲ್ಯದ ಆಧಾರದಲ್ಲಿ ಆಕೆ 15 ರಾಷ್ಟ್ರಗಳ ಕಾಮನ್ವೆಲ್ತ್ ಒಕ್ಕೂಟಕ್ಕೆ ರಾಣಿ ಆಗಿರುವ ಕ್ವೀನ್ ಎಲಿಜಬೆತ್ ಅವರಿಗಿಂತ ಶ್ರೀಮಂತೆ ಎಂದು ತಿಳಿದುಬಂದಿದೆ ಎನ್ನಲಾಗಿದೆ. ಏಕೆಂದರೆ ಕ್ವೀನ್ ಎಲಿಜಬೆತ್ ಅವರ ಒಟ್ಟು ಆಸ್ತಿಯ ಮೌಲ್ಯ 350 ಮಿಲಿಯನ್ ಪೌಂಡ್ ಅಂದರೆ 3400 ಕೋಟಿ ರೂಪಾಯಿಗಳು ಎನ್ನಲಾಗಿದೆ. ಇಂಗ್ಲೆಂಡ್ ದೇಶದ ಕಾನೂನಿನ ಪ್ರಕಾರ ಅಲ್ಲಿನ ಎಲ್ಲ ಮಂತ್ರಿಗಳು ತಮ್ಮ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕೆಂಬ ನಿಯಮಗಳನ್ನು ಅಳವಡಿಸಲಾಗಿದೆ.

Post a Comment

0 Comments