ಇಷ್ಟಕ್ಕೂ ವಿದ್ಯಾಬಾಲನ್ ಅವರ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಲು ಕಾರಣವೇನೆಂದು ತಿಳಿದರೆ, ಮಧ್ಯಪ್ರದೇಶದ ಅರಣ್ಯ ಸಚಿವರಾಗಿರುವ ವಿಜಯ್ ಶಾ ಅವರು ತಮ್ಮ ರಾಜ್ಯದಲ್ಲಿ ಶೂಟಿಂಗ್ ನಡೆಸುತ್ತಿರುವ ಬಾಲಿವುಡ್ ನಟಿಗೆ ಭೋಜನ ಕೂಟಕ್ಕೆ ಆಹ್ವಾನವನ್ನು ನೀಡಿದ್ದರಂತೆ. ಆದರೆ ಸಿನಿಮಾ ಶೆಡ್ಯೂಲ್ ಮೊದಲೇ ನಿಗದಿಯಾಗಿದ್ದರಿಂದ ನಟಿ ವಿದ್ಯಾಬಾಲನ್ ಭೋಜನ ಕೂಟಕ್ಕೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಮರುದಿನ ಚಿತ್ರೀಕರಣ ನಡೆಯುತ್ತಿದ್ದ ಅರಣ್ಯ ಪ್ರದೇಶದಲ್ಲಿ ಸಚಿವರು ಚಿತ್ರೀಕರಣಕ್ಕೆ ತಡೆ ನೀಡಿದ್ದರು ಎನ್ನಲಾಗಿದೆ.
ವಿಜಯ್ ಶಾ ಅವರು ಅರಣ್ಯದೊಳಕ್ಕೆ ಎರಡಕ್ಕಿಂತ ಹೆಚ್ಚು ಜನರೇಟರ್ ವಾಹನಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇರಲಿಲ್ಲ. ಆದರೆ ಚಿತ್ರ ತಂಡವು ಎರಡಕ್ಕಿಂತ ಹೆಚ್ಚು ವಾಹನಗಳಲ್ಲಿ ಬಂದಿದ್ದರಿಂದ ಅರಣ್ಯ ಅಧಿಕಾರಿಗಳು ತಂಡದ ವಾಹನಗಳನ್ನು ತಡೆದಿದ್ದು ನಿಜ ಎಂದೂ, ಹಾಗೂ ಭೋಜನಕೂಟವನ್ನು ಜಿಲ್ಲಾಡಳಿತವು ಏರ್ಪಡಿಸಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ
0 Comments