ನಮ್ಮ ದೇಶದಲ್ಲಿ ಅದೆಷ್ಟೋ ಜನರ ಜೀವನ, ಇನ್ನೊಬ್ಬರಿಗೆ ಪ್ರೇರಣೆಯಾಗುವ, ಸ್ಪೂರ್ತಿಯನ್ನು ನೀಡುವ ರೀತಿಯಲ್ಲಿ ಇದೆ. ಇಂತಹದೇ ಒಂದು ಪ್ರೇರಣಾತ್ಮಕಕ ಕಥೆ ಮಹಾರಾಷ್ಟ್ರದ ಕೈಡರ್ ನ ಐಎಎಸ್ ಅಧಿಕಾರಿ ರಾಜೇಂದ್ರ ಬರೂಡ ಅವರದು ಕೂಡ ಆಗಿದೆ. ಬಾಲ್ಯದಲ್ಲಿ ಮನೆಯಲ್ಲಿ ಕಡು ಬಡತನವಿದ್ದರೂ ಅದಕ್ಕೆ ಅಂಜದೆ ಮುಂದೆ ಸಾಗಿದ ರಾಜೇಂದ್ರ ಅವರು, ಬಾಲ್ಯದಿಂದಲೇ ತಾನು ಎಲ್ಲಾ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ, ಅವರು ಇಂದು ಯಾವ ಎತ್ತರಕ್ಕೆ ಏರಿದ್ದಾರೆಂದರೆ, ಇಂದಿಗೂ ಅನೇಕರು ಆ ಸ್ಥಾನ ತಲುಪುವ ಬಗ್ಗೆ ಕೇವಲ ಕನಸೋ ಅಥವಾ ಕಲ್ಪನೆಯನ್ನೋ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಬೀಲ್ ಎಂಬ ಆದಿವಾಸಿ ಸಮುದಾಯದವರಾದ ರಾಜೇಂದ್ರ ಅವರು ಮೊದಲು ತಮ್ಮ ಪರಿಶ್ರಮದ ಫಲವಾಗಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಆನಂತರ ತನ್ನ ಪ್ರಯತ್ನದಿಂದ ಐಎಎಸ್ ಅಧಿಕಾರಿ ಕೂಡಾ ಆಗಿ ಈಗ ದೇಶ ಸೇವೆಯನ್ನು ಮಾಡುತ್ತಿದ್ದಾರೆ. ರಾಜೇಂದ್ರ ಅವರು ತಮ್ಮ ತಾಯಿಯ ಗರ್ಭದಲ್ಲಿರುವಾಗಲೇ ರೈತ ನಾಗಿದ್ದ ಅವರ ತಂದೆ ತೀರಿಕೊಂಡರು. ಆಗ ಅನೇಕರು ರಾಜೇಂದ್ರ ಅವರ ತಾಯಿಗೆ ಪಾಠ ಮಾಡಿಸಿಕೊಳ್ಳುವಂತೆ ಸಲಹೆಯನ್ನು ನೀಡಿದ್ದರೂ ಕೂಡಾ ಆಕೆ ಹಾಗೆ ಮಾಡಿರಲಿಲ್ಲ. ಆಕೆ ತನ್ನ ಮೂರು ಜನ ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿದ್ದರು.
ರಾಜೇಂದ್ರ ಅವರು ತಮ್ಮ ಶ್ರಮ ಹಾಗೂ ಆಸಕ್ತಿ ಎರಡನ್ನು ಓದಿನಲ್ಲಿ ಬಿಡಲಿಲ್ಲ. 10ನೇ ತರಗತಿಯಲ್ಲಿ 95% ಅಂಕಗಳನ್ನು ಪಡೆದರೆ, 12ನೇ ತರಗತಿಯಲ್ಲಿ ಅವರು 90% ಅಂಕಗಳನ್ನು ಪಡೆದು ಜನರ ಮೆಚ್ಚುಗೆ ಪಡೆದರು. ಮುಂದೆ ಎಂಬಿಬಿಎಸ್ ಪ್ರವೇಶವನ್ನು ಪಡೆದು ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಕೂಡಾ ಮುಗಿಸಿದ ಅವರು, ಅದಾದ ಕೂಡಲೇ ಯುಪಿಎಸ್ಸಿ ಪರೀಕ್ಷೆಗೆ ತನ್ನನ್ನು ತಾನು ಸಜ್ಜುಗೊಳಿಸಿಕೊಂಡರು. ರಾಜೇಂದ್ರ ಮೊದಲನೇ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಪಾಸಾಗಿ ಐಪಿಎಸ್ ಅಧಿಕಾರಿ ಕೂಡಾ ಆದರು
0 Comments