ಈರಾ ತನ್ನ ತಂದೆ ನಟ ಅಮೀರ್ ಖಾನ್ ಅವರ ಫಿಟ್ನೆಸ್ ಕೋಚ್ ನೂಪುರ್ ಶಿಖರೆ ಅವರೊಡನೆ ಪ್ರೇಮದಲ್ಲಿ ಬಿದ್ದಿದ್ದಾಳೆ ಎನ್ನಲಾಗಿದೆ. ಈರಾ ಮತ್ತು ನೂಪುರ್ ಲಾಕ್ಡೌನ್ ಅವಧಿಯಲ್ಲಿ ಒಬ್ಬರಿಗೆ ಮತ್ತೊಬ್ಬರಿಗೆ ಹತ್ತಿರವಾದರು ಎನ್ನಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಹತ್ತಿರವಾದ ಈ ಜೋಡಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವಕಾಶ ನೀಡಿತು ಎನ್ನಲಾಗಿದೆ. ಇಬ್ಬರೂ ಜೊತೆಯಾಗಿ ವರ್ಕೌಟ್ ಮಾಡುವ ವೀಡಿಯೋಗಳನ್ನು ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ವರದಿಗಳ ಪ್ರಕಾರ ಅಮೀರ್ ಖಾನ್ ಅವರ ಮಹಾಬಲೇಶ್ವರ ದಲ್ಲಿ ಇರುವ ಫಾರ್ಮ್ ಹೌಸ್ ನಲ್ಲಿ ಈ ಜೋಡಿ ರಜಾ ದಿನಗಳನ್ನು ಎಂಜಾಯ್ ಮಾಡಲು ಹೋಗಿದ್ದರು ಎನ್ನಲಾಗಿದೆ. ಇಬ್ಬರೂ ಹೆಚ್ಚು ಸಮಯ ಜೊತೆಗೆ ಕಳೆದು ಇನ್ನೂ ಚೆನ್ನಾಗಿ ಒಬ್ಬರನ್ನೊಬ್ಬರು ಅರಿಯುವ ಪ್ರಯತ್ನ ಮಾಡಿದ್ದಾರೆನ್ನಲಾಗಿದೆ. ಅಲ್ಲದೇ ಈರಾ ನೂಪುರ್ ಅವರನ್ನು ತನ್ನ ತಾಯಿ ರೀನಾ ದತ್ತ ಅವರಿಗೆ ಕೂಡಾ ಪರಿಚಯ ಮಾಡಿಸಿದ್ದಾಳೆ ಎನ್ನಲಾಗಿದೆ.
0 Comments