ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ತಿಳಿದುಕೊಳ್ಳುವ ಕುತೂಹಲವಿದೆಯೇ?


ಗರ್ಭದಲ್ಲಿ ಬೆಳೆಯುತ್ತಿರುವ ಮಗು ಯಾವುದೆಂದು ಹೇಳಲು ಕಷ್ಟ. ಏಕೆಂದರೆ ಪ್ರತಿಯೊಬ್ಬ ಗರ್ಭಿಣಿಯ ದೈಹಿಕ ಗುಣಲಕ್ಷಣಗಳು ವಿಭಿನ್ನವಾಗಿರುತ್ತವೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಹೆಣ್ಣು ಅಥವಾ ಗಂಡು ಎಂದು ನಿರ್ಧರಿಸಲು ಸಹಾಯ ಮಾಡುವುದು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಎಂದು ಹೇಳಬಹುದು. ಈ ಆಧುನಿಕ ತಂತ್ರಜ್ಞಾನದಿಂದ ಮಗುವಿನ ಲಿಂಗ ಗುರುತಿಸಬೇಕು ಎಂದರೆ ಗರ್ಭಧಾರಣೆಯಾಗಿ 20 ವಾರ ತುಂಬಿರಬೇಕು. ಈ ಸಮಯಕ್ಕಿಂತ ಮೊದಲು ನಿರ್ಧರಿಸಲು ಸಾಧ್ಯವಿಲ್ಲ.

ಮುಂಜಾನೆಯ ಆರೋಗ್ಯ ಸಮಸ್ಯೆ ಅಥವಾ ಅತಿಯಾದ ಅಸಹನೀಯ ಸ್ಥಿತಿಯು ಗರ್ಭದಲ್ಲಿ ಹೆಣ್ಣು ಮಗುವಿನ ಬೆಳವಣಿಗೆಯನ್ನು ಸೂಚಿಸುತ್ತವೆ. ಇತ್ತೀಚೆಗೆ ನಡೆಸಿದ ಕೆಲವು ಸಂಶೋಧನೆಯ ಪ್ರಕಾರ ಮುಂಜಾನೆ ಗರ್ಭಿಣಿಯರಿಗೆ ಆರೋಗ್ಯದಲ್ಲಿ ಅಸಹನೀಯತೆ ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ ಅದು ಹೆಣ್ಣು ಮಗುವಿನ ಬೆಳವಣಿಗೆ ಎಂದು ಹೇಳಲಾಗುವುದು. ಅಲ್ಲದೆ ಗರ್ಭದಲ್ಲಿ ಹೆಣ್ಣು ಮಗುವಿನ ಬೆಳವಣಿಗೆಯಾಗುತ್ತಿದ್ದರೆ ಮಹಿಳೆಯರು ಹೆಚ್ಚು ಉರಿಯೂತವನ್ನು ಅನುಭವಿಸುತ್ತಾರೆ ಎಂದು ಸಹ ಹೇಳುತ್ತಾರೆ. ಮುಂಜಾನೆ ಹೆಚ್ಚು ಅಸ್ವಸ್ಥತೆ ಕಾಣಿಸಿಕೊಳ್ಳುವುದು ಹೆಣ್ಣು ಮಗುವಿನ ಬೆಳವಣಿಗೆಯ ಸಂಕೇತ.


ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಯಿಂದ ಹೆಚ್ಚು ಭಾವನಾತ್ಮಕ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಕೆಲವು ಮಹಿಳೆಯರಿಗೆ ಹೆಣ್ಣು ಭ್ರೂಣದ ಬೆಳವಣಿಗೆಯಾಗುತ್ತಿದ್ದರೆ ಈಸ್ಟ್ರೊಜೆನ್ ಮಟ್ಟ ಹೆಚ್ಚುವುದು. ಆಗ ಭಾವನೆಗಳಲ್ಲಿ ಅತಿಯಾದ ವ್ಯತ್ಯಾಸ ಉಂಟಾಗುವುದು ಎನ್ನಲಾಗುತ್ತದೆ. ಈ ಸಿದ್ಧಾಂತ ಯಾವುದೇ ಸಂಶೋಧನೆಯನ್ನು ಬೆಂಬಲಿಸುವುದಿಲ್ಲ. ಸಾಮಾನ್ಯವಾಗಿ ಹಾರ್ಮೋನ್‍ಗಳು ಪ್ರಸವದ ನಂತರ ಹಾಗೂ ವಾತಾವರಣಕ್ಕೆ ಅನುಗುಣವಾಗಿ ಬದಲಾವಣೆ ಕಾಣುವುದು ಎಂದು ಹೇಳಲಾಗುತ್ತದೆ.

Post a Comment

0 Comments